ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಯಿಂದ 2026 ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.( AIIMS Recruitment 2026 ) ಈ ನೇಮಕಾತಿಯ ಮೂಲಕ ನರ್ಸಿಂಗ್ ಅಧಿಕಾರಿ (Nursing Officer) ಹುದ್ದೆಗೆ ಒಟ್ಟು 2551 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಈ ಹುದ್ದೆಗಳು ಗ್ರೂಪ್ B ವರ್ಗಕ್ಕೆ ಸೇರಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಮತ್ತು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ತಿಂಗಳಿಗೆ ಸುಮಾರು ₹9,300 ರಿಂದ ₹34,800 ವರೆಗೆ ಸಂಬಳ ನೀಡಲಾಗುತ್ತದೆ. ಭಾರತದೆಲ್ಲೆಡೆ ಇರುವ AIIMS ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಕೂಡ ದೊರೆಯುತ್ತದೆ.
ಈ ನೇಮಕಾತಿಗೆ ಭಾರತೀಯ ಮಹಿಳೆಯರು ಹಾಗೂ ಪುರುಷರು ಎರಡೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ ಮತ್ತು ಆಯ್ಕೆ ವಿಧಾನವನ್ನು ತಿಳಿದುಕೊಳ್ಳುವುದು ಮುಖ್ಯ.
AIIMS Recruitment 2026
ಸಂಸ್ಥೆಯ ಹೆಸರು: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)
ಹುದ್ದೆ ಹೆಸರು: ನರ್ಸಿಂಗ್ ಅಧಿಕಾರಿ
ಒಟ್ಟು ಹುದ್ದೆಗಳು: 2551
ಕೆಲಸದ ಸ್ಥಳ: ಭಾರತದೆಲ್ಲೆಡೆ AIIMS ಆಸ್ಪತ್ರೆಗಳು
ಸಂಬಳ: ₹9,300 – ₹34,800 ಪ್ರತಿ ತಿಂಗಳು
ಅರ್ಜಿ ಸಲ್ಲಿಸುವವರು: ಭಾರತೀಯ ಮಹಿಳೆಯರು ಮತ್ತು ಪುರುಷರು
‘ಏಮ್ಸ್’ ಭಾರತ ಒಕ್ಕೂಟ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಉನ್ನತ ವೈದ್ಯಕೀಯ ಹಾಗೂ ಪ್ರತಿಷ್ಠಿತ ಸಂಸ್ಥೆಯಾಗಿದೆ. ಅತ್ಯುನ್ನತ ಮಟ್ಟದ ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಏಮ್ಸ್ ಆಸ್ಪತ್ರೆಗಳು ಒದಗಿಸುತ್ತವೆ. ದೇಶದಲ್ಲಿ ಭಾಸದ್ಯ ಒಟ್ಟು 20 ಏಮ್ಸ್ ಗಳಿವೆ.
ಭಾರತದಲ್ಲಿ ಏಮ್ಸ್‌ಗಳು
1,AIIMS ನವದೆಹಲಿ,ದೆಹಲಿ
2,AIIMS ಭೋಪಾಲ್,ಮಧ್ಯಪ್ರದೇಶ
3,AIIMS ಭುವನೇಶ್ವರ, ಒಡಿಶಾ
4, AIIMS ಜೋದ್‌ಪುರ,ರಾಜಸ್ಥಾನ
5,AIIMS ಪಾಟ್ನಾ,ಬಿಹಾರ
6, AIIMS ರಾಯ್‌ಪುರ, ಛತ್ತೀಸ್‌ಗಢ
7,AIIMS ರಿಷಿಕೇಶ,ಉತ್ತರಾಖಂಡ
8,AIIMS ರಾಯ್‌ಬರೇಲಿ, ಉತ್ತರ ಪ್ರದೇಶ
9,AIIMS ನಾಗುರ,ಮಹಾರಾಷ್ಟ್ರ
10, AIIMS ಮಂಗಳಗಿರಿ, ಆಂಧ್ರಪ್ರದೇಶ
11,AIIMS ಗೋರಖ್‌ಪುರ, ಉತ್ತರ ಪ್ರದೇಶ
12, AIIMS 2,
13,AIIMS ಬಿಬಿನಗರ, ತೆಲಂಗಾಣ
14,AIIMS ದಿಯೋಘರ್, ಜಾರ್ಖಂಡ್
15,AIIMS ಕಲ್ಯಾಣಿ,ಪಶ್ಚಿಮ ಬಂಗಾಳ
16,AIIMS ಗುವಾಹಟಿ,ಅಸ್ಸಾಂ
17,AIIMS ವಿಜಯಪುರ, ಜಮ್ಮು ಮತ್ತು ಕಾಶ್ಮೀರ
18,AIIMS ರಾಜ್‌ಕೋಟ್, ಗುಜರಾತ್
19,AIIMS ಮಧುರೈ, ತಮಿಳುನಾಡು
20,AIIMS-CAPFIMS (ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ವೈದ್ಯಕೀಯ ವಿಜ್ಞಾನ ಸಂಸ್ಥೆ),ದೆಹಲಿ
ಹುದ್ದೆಗಳ ಮಾಹಿತಿ
AIIMS ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ನರ್ಸಿಂಗ್ ಕ್ಷೇತ್ರದಲ್ಲಿ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಇದು ಒಂದು ದೊಡ್ಡ ಅವಕಾಶವಾಗಿದ್ದು, ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ.
ವಯೋಮಿತಿ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು.
-
ಕನಿಷ್ಠ ವಯಸ್ಸು: 18 ವರ್ಷ
-
ಗರಿಷ್ಠ ವಯಸ್ಸು: 30 ವರ್ಷ
ವಯೋಮಿತಿ ಸಡಿಲಿಕೆ
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಕೆಲವು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
-
SC / ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
-
OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್ (B.Sc Nursing) ಅಥವಾ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ (Post Basic B.Sc Nursing) ಪದವಿ ಪಡೆದಿರಬೇಕು.
- ಅಥವಾ ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ (GNM) ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ವಯೋಮಿತಿ: ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು (ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ)
ನರ್ಸಿಂಗ್ ಕ್ಷೇತ್ರದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ
AIIMS ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಎರಡು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಪ್ರಾಥಮಿಕ ಪರೀಕ್ಷೆ (Prelims):
- ಮುಖ್ಯ ಪರೀಕ್ಷೆ (Mains):
ಪ್ರಾಥಮಿಕ ಪರೀಕ್ಷೆಯ ಮಾದರಿ (Prelims Exam Pattern):
- ಪರೀಕ್ಷೆಯು ಒಟ್ಟು 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳನ್ನು (MCQs) ಒಳಗೊಂಡಿರುತ್ತದೆ.
- ಪರೀಕ್ಷೆ ಬರೆಯಲು 90 ನಿಮಿಷಗಳ ಕಾಲಾವಕಾಶವಿರುತ್ತದೆ.
- ನೆನಪಿರಲಿ: ಇಲ್ಲಿ ನೆಗೆಟಿವ್ ಮಾರ್ಕಿಂಗ್ (Negative Marking) ವ್ಯವಸ್ಥೆ ಇದೆ! ಪ್ರತಿ ತಪ್ಪು ಉತ್ತರಕ್ಕೂ 1/3 ಅಂಕಗಳನ್ನು ಕಳೆಯಲಾಗುತ್ತದೆ. ಆದ್ದರಿಂದ, ಗೊತ್ತಿರುವ ಉತ್ತರಗಳನ್ನಷ್ಟೇ ಎಚ್ಚರಿಕೆಯಿಂದ ಬರೆಯುವುದು ಮುಖ್ಯ.
ಈ ಪರೀಕ್ಷೆಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯುತ್ತದೆ.
ಪರೀಕ್ಷಾ ಪಠ್ಯಕ್ರಮ (Syllabus Overview) ನರ್ಸಿಂಗ್ ವಿಷಯಗಳು:
- Fundamentals of Nursing
- Medical Surgical Nursing
- Community Health Nursing
- Pediatric Nursing
- Mental Health Nursing
- Obstetrics & Gynecology
- Pharmacology
- Nutrition
ಸಾಮಾನ್ಯ ವಿಷಯಗಳು:
- Reasoning
- General Awareness
- Computer Basics
AIIMS ನಲ್ಲಿ ಕೆಲಸ ಮಾಡುವುದರಿಂದ ಸಿಗುವ ಪ್ರಯೋಜನಗಳು:
ಕೇಂದ್ರ ಸರ್ಕಾರಿ ಉದ್ಯೋಗ ಭದ್ರತೆ ಉತ್ತಮ ಸಂಬಳ ಮತ್ತು ಪಿಂಚಣಿ ಆರೋಗ್ಯ ವಿಮೆ ಪ್ರೋಮೋಶನ್ ಅವಕಾಶ ತರಬೇತಿ ಕಾರ್ಯಕ್ರಮಗಳು ವೃತ್ತಿಪರ ಬೆಳವಣಿಗೆ ಅಂತರರಾಷ್ಟ್ರೀಯ ಮಾನ್ಯತೆ ಪ್ರಮುಖ ಸೂಚನೆ (Important Note) ನರ್ಸಿಂಗ್ ಕ್ಷೇತ್ರದಲ್ಲಿ ಉನ್ನತ ಭವಿಷ್ಯ ನಿರ್ಮಿಸಿಕೊಳ್ಳಲು AIIMS Recruitment 2026 ಅತ್ಯುತ್ತಮ ಅವಕಾಶವಾಗಿದೆ. ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಸಮಾಜಸೇವೆ ಮಾಡುವ ಜೊತೆಗೆ ಆರ್ಥಿಕ ಭದ್ರತೆ ಪಡೆಯಲು ಇದು ಸೂಕ್ತ ಸಮಯವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಅರ್ಜಿ ಶುಲ್ಕ
ಅಭ್ಯರ್ಥಿಗಳು ತಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
-
SC / ST ಅಭ್ಯರ್ಥಿಗಳಿಗೆ: ₹2400
-
ಸಾಮಾನ್ಯ / OBC ಅಭ್ಯರ್ಥಿಗಳಿಗೆ: ₹3000
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ
AIIMS ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬೇಕು.
-
ಮೊದಲು AIIMS ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
-
ಹೊಸ ಅಭ್ಯರ್ಥಿಗಳು ಮೊದಲು Registration ಮಾಡಿಕೊಳ್ಳಬೇಕು
-
ನಂತರ Login ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು
-
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
-
ಅರ್ಜಿ ಶುಲ್ಕವನ್ನು ಪಾವತಿಸಬೇಕು
-
ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಅಂತಿಮವಾಗಿ ಅರ್ಜಿ ಸಲ್ಲಿಸಬೇಕು
- ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, ದಯವಿಟ್ಟು AIIMS ನ ಅಧಿಕೃತ ವೆಬ್‌ಸೈಟ್ aiimsexams.ac.in ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿ ನೀಡದಂತೆ ಎಚ್ಚರಿಕೆ ವಹಿಸಬೇಕು.
ಪ್ರಮುಖ ದಿನಾಂಕಗಳು
-
ಅರ್ಜಿ ಪ್ರಾರಂಭ ದಿನಾಂಕ: 24 ಫೆಬ್ರವರಿ 2026
-
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 16 ಮಾರ್ಚ್ 2026
-
ಅಪ್ಲಿಕೇಶನ್ ತಿದ್ದುಪಡಿ ದಿನಾಂಕ: 25 ಮಾರ್ಚ್ ರಿಂದ 27 ಮಾರ್ಚ್ 2026 (ಸಂಜೆ 5 ಗಂಟೆಯವರೆಗೆ)
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಉತ್ತಮ
Read More :
Ok sir thank you for your good information I will also share this information with our friends.